ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯಾದಗಿರಿ

ಕರ್ನಾಟಕ ಸರ್ಕಾರ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯಾದಗಿರಿ

ಯಾದಗಿರಿ ಜಿಲ್ಲೆಯ ಹಿನ್ನಲೆ

           ಚಾರಿತ್ರಿಕವಾಗಿ ಈ ಹಿಂದೆ ಈ ಪ್ರದೇಶವನ್ನು “ಯಾದವ” ಎಂಬ ರಾಜವಂಶದವರು ಆಳುತ್ತಿದ್ದರಂತೆ. ಯಾದವರ ಈ ವಂಶವನ್ನು ಕೆಲವು ಕಡೆ ಯದುವಂಶ ಎಂದೂ ಉಲ್ಲೇಖಿಸಲಾಗಿದೆ ಎಂಬುದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಕ್ರಿ.ಶ 1347 ರಿಂದ 1425 ರ ವರೆಗೆ ಯಾದಗಿರಿಯು ಯಾದವ ಮನೆತನದ ರಾಜಧಾನಿ ಆಗಿತ್ತು. ಕರ್ನಾಟಕದ ಇತಿಹಾಸದಲ್ಲಿಪ್ರಮುಖ ರಾಜಮನೆತನಗಳಾದ ಶಾತವಾಹನರು, ಚಾಲುಕ್ಯರು,ರಾಷ್ಟ್ರಕೂಟರು, ಆದಿಲ್ ಶಾಹಿಗಳು, ನಿಜಾಮ್ ಶಾಹಿಗಳು ಯಾದಗಿರಿಯನ್ನು ಆಳ್ವಿಕೆ ಮಾಡಿದ್ದಾರೆ. ಯಾದಗಿರಿಯ ಮಧ್ಯಭಾಗದಲ್ಲಿ ಭವ್ಯವಾದ ಗುಡ್ಡವಿದೆ ಇದನ್ನು ಬೆಟ್ಟವೆಂತಲೂ ಕರೆಯುವರು. ಯಾದವರು ಆಳುತ್ತಿದ್ದ ಈ ನಾಡನ್ನು ಬೆಟ್ಟ ಆವರಿಸಿತ್ತು. ಡಿಸೆಂಬರ್-30 2009 ರಂದು ರಾಜ್ಯದ 30 ನೇ ಜಿಲ್ಲೆಯಾಗಿ ಯಾದಗಿರಿ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದೆ.

 

ಭೌಗೋಳಿಕ ಹಿನ್ನಲೆ

     ಯಾದಗಿರಿ ಜಿಲ್ಲೆಯು ಉತ್ತರದಲ್ಲಿ ಕಲಬುರಗಿ ಜಿಲ್ಲೆ, ಪಶ್ಚಿಮದಲ್ಲಿ ವಿಜಯಪೂರ ಜಿಲ್ಲೆ, ಪೂರ್ವದಲ್ಲಿ- ತೆಲಂಗಾಣದ ನಾರಯಣಪೇಟ ಜಿಲ್ಲೆಯಿದೆ. ದಕ್ಷಿಣದಲ್ಲಿ ತೆಲಂಗಾಣದ ನಾರಯಣಪೇಟ ಹಾಗೂ ರಾಯಚೂರು ಜಿಲ್ಲೆಗಳು ಇರುತ್ತವೆ. ಜಿಲ್ಲೆಯ ವಿಸ್ತೀರ್ಣ 5160.88 ಚ.ಕಿ.ಮೀ ಹೊಂದಿದ್ದು, ಕೃಷ್ಣಾ ಮತ್ತು ಭೀಮಾ ಎರಡು ಪ್ರಮುಖ ನದಿಗಳು ಹರಿಯುತ್ತಿರುವುದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಹಾಗೂ ಭೀಮಾ ತೀರದ ರೈತರು ಹತ್ತಿ ಹಾಗೂ ಭತ್ತ ವ್ಯಾಪಕವಾಗಿ ಬೆಳೆಯುತ್ತಾರೆ.

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS